ಉದಯ್ ಫಿಲಂಸ್ ಲಾಂಛನದಲ್ಲಿ ಉದಯ್ ಕುಮಾರ್ ಯು.ಆರ್ ನಿರ್ಮಾಣದ ಜೋಗಿಗುಡ್ಡ ಚಿತ್ರಕ್ಕೆ ಗೋಕರ್ಣದ ಓಂ ಬೀಚ್, ಕೂಡ್ಲಿ ಬೀಚ್ನಲ್ಲಿ ಜಯಂತ್ ಕಾಯ್ಕಿಣಿ ರಚಿಸಿದ ಏನೇ ಆದರು ನನ್ನೆದುರಲ್ಲೇ ನೀನಿರು ಅಥವಾ ಎಲ್ಲೇ ಹೋದರು ನನ್ನುಸಿರೇ ಆಗಿರು ಮಧುರವಾದ ಗೀತೆ ಬರೆಯುತಿದೆ ನವಿರಾಗಿ ಈ ನಯನ ಎದೆ ಇಕ್ಕದೇನೇ ಓಡುವೆ.....ನಾ.... ಎಂಬ ಗೀತೆಗೆ ಹೈಟ್ ಮಂಜು ನೃತ್ಯ ನಿರ್ದೇಶನದಲ್ಲಿ ಧರ್ಮ ಕೀರ್ತಿರಾಜ್, ನಿಖಿತಾ ನಾರಾಯಣ್ ಅಭಿನಯಿಸಿದ ಹಾಡಿನ ಚಿತ್ರೀಕರಣ ನಡೆಯಿತು. ಟಿ. ನಾಗಚಂದ್ರ ನಿರ್ದೇಶನದ ಈ ಚಿತ್ರಕ್ಕೆ ಕೆ.ಎಂ.ವಿಷ್ಣುವರ್ಧನ್ ಛಾಯಾಗ್ರಹಣ,. ಸಂಗೀತ - ಜೆಸ್ಸಿ ಗಿಫ್ಟ್, ಕಲೆ-ಮೋಹನ್ ಬಿ ಕೆರೆ, ಸಹ ನಿರ್ದೇಶನ - ಗಂಗಾಧರ್ ಹೊನ್ನರಾಜ್, ಸಂಭಾಷಣೆ-ಚಿ,ಭಾಸ್ಕರ್, ಸಂಕಲನ-ಪಿ.ಆರ್. ಸೌಂದರ್ ರಾಜ್, ಸಾಹಿತ್ಯ- ಜಯಂತ್ ಕಾಯ್ಕಿಣಿ, ಕವಿರಾಜ್, ಕೆ. ಕಲ್ಯಾಣ್, ನೃತ್ಯ - ಇಮ್ರಾನ್ ಸರ್ದಾರಿಯಾ, ಸಾಹಸ-ರವಿವರ್ಮ, ಡಿಫೆಂಟ್ ಡ್ಯಾನಿ. ನಿರ್ವಹಣೆ-ರಾಜಾರಾವ್, ಮೇಲ್ವಿಚಾರಣೆ-ಶಿವಪ್ರಸಾದ್ ತೀರ್ಥಹಳ್ಳಿ ತಾರಾಗಣದಲ್ಲಿ - ಧರ್ಮ ಕೀರ್ತಿರಾಜ್, ನಿಖಿತಾ ನಾರಾಯಣ್, ಶರಣ್ ಕೌರ್, ಅವಿನಾಶ್, ಮಾಳವಿಕ, ರವಿಶಂಕರ್, ಶಿವಕುಮಾರ್, ಶ್ರೀರಕ್ಷ, ರಾಜು ತಾಳೀಕೋಟೆ, ಸ್ವಯಂವರ ಚಂದ್ರು, ಪೆಟ್ರೋಲ್ ಪ್ರಸನ್ನ, ಪ್ರಶಾಂತ್ ಸಿದ್ಧು (ನೀಗ್ರೋ) ರಮಾನಂದ್, ಮುಂತಾದವರಿದಾರೆ.